ಸೇಬು ಬೋರೆ ಲಾಭ ಜೋರು, ಬಾಂಬೆ ತಳಿಯ ಲೋಕಲ್‌ ಬೆಳೆ

ಸೇಬು ಬೋರೆ ಲಾಭ ಜೋರು, ಬಾಂಬೆ ತಳಿಯ ಲೋಕಲ್‌ ಬೆಳೆ

ಅಥಣಿಯ ಕೋಹಳ್ಳಿಯ ರಾಜೀವರಿಗೆ 10 ಎಕರೆ ಜಮೀನು. ಎಷ್ಟೋ ಜನಕ್ಕೆ ಜಮೀನು ಇದ್ದರು ಕೃಷಿ ಮಾಡಿ, ಲಾಭ ಮಾಡುವ ಹಾದಿ ಗೊತ್ತಿರುವುದಿಲ್ಲ. ಈ ರಾಜೀವರು ಹಾಗಲ್ಲ. ಜಮೀನಿನ ಇಂಚು, ಇಂಚು ಜಾಗವನ್ನು ಕೃಷಿಗೆ ಎತ್ತಿಟ್ಟಿದ್ದಾರೆ.

ಮೂಲತಃ ಕೃಷಿ ಕುಟುಂಬದಲ್ಲಿ ಹುಟ್ಟಿರುವ ರಾಜೀವರವರು ಪ್ರಾಥಮಿಕ ಹಂತದವರೆಗೆ ತಮ್ಮ ಶಿಕ್ಷಣ ಪೂರೈಸಿದ ರಾಜೀವರವರು ಕೃಷಿಯಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡು ಯುವ ಮಾದರಿ ಕೃಷಿಕರಾಗಿದ್ದಾರೆ. ಶೂನ್ಯ ಕೃಷಿಯಲ್ಲಿ ಇವರಿಗೆ ಅಭಿರುಚಿ. ಪ್ರಸ್ತುತ ಹೈಬ್ರಿಡ್… ತಳಿಯ ‘ಸೇಬು ಬೋರೆ’ ಎನ್ನುವ ತಳಿಯನ್ನು ಬೆಳೆಸಿರುವ ರಾಜೀವರವರು ಮೊದಲ ವರ್ಷದ ಪ್ರಾಥಮಿಕ ಹಂತದ ಬೆಳವಣಿಗೆಯಲ್ಲಿದ ಬೋರೆ ಹಣ್ಣುಗಳ ಕೃಷಿಯಲ್ಲಿ ಪ್ರಥಮ ಬೆಳೆಯಲ್ಲಿ ತಮ್ಮ ಖರ್ಚು ವೆಚ್ಚುಗಳನ್ನು ಸರಿದೂಗಿಸಿದೆ. ಅಂದರೆ ಮೂರು ಎಕರೆಯ ತೋಟದಲ್ಲಿ ಮೊದಲ ವರುಷ 1 ಲಕ್ಷ$ಗಳಿಗಿಂತ ಅಧಿಕ ಲಾಭ ದೊರೆತಿದೆ. ಈಗ ಎರಡನೇ ವರ್ಷದ ಬೆಳೆಗೆ ಗಿಡಗಳು ಆರೋಗ್ಯ ಪೂರ್ಣವಾಗಿ ಎದ್ದು ನಿಂತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಬಾರೇ ಹಣ್ಣುಗಳ ಬೆಲೆಯು ಸರಾಸರಿಯಾಗಿ ಕೆ.ಜಿ ಗೆ 25ರೂ.ಇದೆ. ಕ್ವಿಂಟಾಲಗೆ 2,500ರೂ.ಗಳು. ಅಂದರೆ 1 ಟನ್‌ ಗೆ 25,000 ರೂ.ಗಳ ಮಾರುಕಟ್ಟೆಯ ಬೆಲೆಯಿದೆ. ಎರಡನೇ ಸೀಜನ…ನ ಪ್ರಾಥಮಿಕ ಹಂತದದಲ್ಲಿರುವ ಪಕ್ವವಾಗಿರುವ ಹಣ್ಣುಗಳು ಎರಡು ದಿನಕೊಮ್ಮೆ ಮಾರುಕಟ್ಟೆಗೆ ರಪ್ತಾಗುತ್ತಿವೆ.ಈ ವರ್ಷ ಸರಿಸುಮಾರು 5 ಲಕ್ಷಕ್ಕೂ ಅಧಿಕ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ ರಾಜೀವ್‌. ಗಿಡದಿಂದ ಗಿಡಕ್ಕೆ 8 ಅಡಿ, ಸಾಲಿನಿಂದ ಸಾಲಿಗೆ 14 ಅಡಿ ಅಂತರದಲ್ಲಿ ಬೆಳೆಸಿದ್ದಾರೆ. ದ್ರಾಕ್ಷಿಗೆ ಬರೋ ರೋಗಗಳೇ ಇವಕ್ಕೂ ಬರುತ್ತವೆ. ಆದರೆ ಸುಭಾಷ್‌ ಪಾಳೇಕಾರರ ಪದ್ಧತಿಯನ್ನೇ ಬಳಸಿರುವುದರಿಂದ ರೋಗದ ಕಾಡುವಿಕೆ ಕಡಿಮೆ. ಬಂದರೂ ಮಜ್ಜಿಗೆ ಉಳಿ, ಗೋ ಮೂತ್ರ ಬಳಸುವುದರಿಂದ ರೋಗದ ಪರಿಣಾಮ ಕಡಿಮೆ. ಇದರ ಜೊತೆಗೆ ತಿಪ್ಪೆಗೊಬ್ಬರವನ್ನು ಕಾಲ ಕಾಲಕ್ಕೆ ಕೊಡುತ್ತಾರೆ.

15 ಎಕರೆಯಲ್ಲಿ 2 ಎಕರೆ ದ್ರಾಕ್ಷಿ, ಒಂದು ಎಕರೆ ಮಾವು, ನುಗ್ಗೆ ತೋಟ ಹೀಗೆ ನಾನಾ ಬೆಳೆಗಳಿವೆ. ಇದರಲ್ಲಿ ಬೋರೆ ಹಣ್ಣು ಕೂಡ ಒಂದು. ಅಥಣಿ ತಾಲ್ಲೂಕಿನ ಪೂರ್ವ ಭಾಗದ ರೈತರು ಸಾಂಸ್ಕೃತಿಕ ಬೆಳೆಗಳ ಕೃಷಿಯಿಂದ ನಷ್ಟ ಅನುಭವಿಸುತ್ತಿರುವಾಗ ‘ಶೂನ್ಯ ಬಂಡವಾಳ ಅಧಿಕ ಲಾಭ’ದ ಸಾವಯುವ ಕೃಷಿ ಪದ್ಧತಿಯಿಂದ ಲಾಭ ಅನೇಕ ಜನರ ಕಣ್ಣು ತೆರೆಸಿದೆ.


admin

MHR Foundation of India