ರೈತನ ಅಪ್ಪಿಕೋ ಇದು ನಿಮ್ಮದೇ ವೇದಿಕೆ
ರೈತನ ಅಪ್ಪಿಕೋ..” ಇದು ನಿಮ್ಮದೇ ವೇದಿಕೆ….
ನಮ್ಮಯ ಅಜ್ಜನ ಕಾಲದ ಕೃಷಿ ತಿಳಿದವರು, ವರ್ಷಾನುವರ್ಷದಿಂದ ಕೃಷಿ ಮಾಡುತ್ತಿರುವವರು, ಇನ್ನು ಮುಂದೆ ಕೃಷಿ ಮಾಡಬೇಕೆಂದುಕೊಂಡವರು, ಕೃಷಿಯಲ್ಲೇ ಜೀವನದ ದಾರಿ ನೋಡಬೇಕೆಂದವರು, ಕೃಷಿಯಲ್ಲಿ ಸೋತವರು, ಕೃಷಿಯ ನಿಪುಣತೆ ತಿಳಿದವರು, ಕೃಷಿಜ್ಞಾನವ ಹಂಚಬೇಕೆಂದುಕೊಂಡವರು, ಮುಂದಿನ ಪೀಳಿಗೆಗೆ ಸುಸ್ಥಿರ ಕೃಷಿ ಪದ್ಧತಿ ಉಳಿಸಲು ಇಚ್ಚಿಸುವರು, ಕೃಷಿ ದಾರಿ ತಪ್ಪುತ್ತಿದೆ ಎಂದು ನಂಬಿದವರು, ತಮ್ಮ ಮಕ್ಕಳು ಯಾವಾಗಲೂ ಕೃಷಿಕರು ಆಗಲಿ ಎಂದು ಇಚ್ಚಿಸುವವರು, ಕೃಷಿ ಪ್ರಾರಂಭಿಸಿ ಕಷ್ಟಕ್ಕೆ ಸಿಲಿಕಿದವರು, ಕೃಷಿ ನಮಗಲ್ಲ ಎನ್ನುವವರು, ನನ್ನ ಮಕ್ಕಳು ಕೃಷಿ ಇಂದ ದೂರ ಇರಬೇಕು ಎಂದು ಪ್ರತಿಪಾದಿಸುವವರು, ವ್ಯವಸಾಯ ನೇಣಿಗೆ ಶೂಲ ಎನ್ನುವವರು, ವ್ಯವಸಾಯ ವ್ಯವಹಾರ ಎನ್ನುವವರು, ವ್ಯವಸಾಯವೇ ಶ್ರೇಷ್ಠ ಎನ್ನುವವರು…
ವ್ಯವಸಾಯ ಒಂದೇ, ದೃಷ್ಟಿಕೋನ ಹಲವು…
ನಿಮ್ಮ ಮಾತಿಗೆ ಮನ್ನಣೆ ಬೇಕೇ, ನಿಮ್ಮ ಜ್ಞಾನವನ್ನು ಹಂಚಬೇಕೇ, ನಿಮ್ಮದೇ ಪ್ರಶ್ನೆಗೆ ಉತ್ತರ ಬೇಕೇ, ಯಾವುದೋ ಉತ್ತರಕ್ಕೆ ಪ್ರಶ್ನಿಸಬೇಕೇ, ನಿಮ್ಮ ಒಳಗಿನ ಮಾತಿಗೆ ವೇದಿಕೆ ಬೇಕೇ..??
ಅದೇ “ರೈತನ ಅಪ್ಪಿಕೋ..” ನಮ್ಮಯ ಸಹಸ್ರ ಉದಯೋನ್ಮುಖ ಯೋಚನೆ, ಯೋಜನೆ ಹಾಗು ಕೃಷಿ ಜ್ಞಾನಗಳಿಂದ ನಮ್ಮಯ ರೈತನ ಅಪ್ಪಿಕೊಳ್ಳೋಣ. ಇಷ್ಟು ದಿನ ನಮ್ಮ ಹೊಟ್ಟೆ ತುಂಬಿಸಿದ ಅನ್ನದಾತನಿಗೆ, ನಮ್ಮಯ ಜ್ಞಾನಗಳ ಅಭಿಷೇಕ ಮಾಡೋಣ, ವಿಚಾರ ವಿನಿಮಯಗಳ ಹೂರಣ ಬಡಿಸೋಣ.
ಸಹಸ್ರಾರು ಮರಗಳ-ಹಣ್ಣು-ತರಕಾರಿಗಳ ಬೆಳೆಯೋ ಒಬ್ಬ ರೈತನ ಅಪ್ಪಿಕೊಂಡು ಸಹಸ್ರಾರು ಮರಗಳಿಗೆ ಜೀವ ತುಂಬೋಣ.
ಇಂತಹ ಒಂದು ವಿಶಿಷ್ಟ ವಿಚಾರಧಾರೆ ಕಾರ್ಯಗಾರವನ್ನು ಸಕಲ ಜೀವಾತ್ಮರ ಲೇಸನ್ನು ಬಯಸುವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಫಕೀರರಾದ ಶ್ರೀ ಚಂದ್ರಶೇಖರ್ ಕಾಡಾದಿ ಅವರು ಬೆಂಗಳೂರಿನಲ್ಲಿ ಎರಡು ದಿನ, ನೈಸರ್ಗಿಕ ಕೃಷಿ ಸಂಸ್ಥೆಯಾದ MHR Foundation of India ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದಾರೆ.
ಕಾರ್ಯಾಗಾರದ ಯೋಜನೆಗಳು:-
ತರಬೇತಿದಾರರು : ಶ್ರೀ ಚಂದ್ರಶೇಖರ್ ಕಾಡಾದಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಫಕೀರರು .
ದಿನಾಂಕ: 18-ಆಗಸ್ಟ್-2018 ಶನಿವಾರ ಹಾಗು 19-ಆಗಸ್ಟ್-2018 ಭಾನುವಾರ.
ಸಮಯ: ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ
ಕಾರ್ಯಾಗಾರದ ವಿವರ: 18-ಆಗಸ್ಟ್-2018 ಶನಿವಾರದಂದು “ರೈತನ ಅಪ್ಪಿಕೋ” ವಿಚಾರ ವಿನಿಮಯ , “ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಒಂದು ದಿನದ ತರಬೇತಿ ಹಾಗು 19-ಆಗಸ್ಟ್-2018 ಭಾನುವಾರದಂದು “ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಒಂದು ದಿನದ ತರಬೇತಿ”
ಭಾಷೆ: ಕನ್ನಡ
ಸ್ಥಳ: MHR Foundation of India , 22/2, 2ನೇ ಮಹಡಿ,1ನೇ ಮುಖ್ಯರಸ್ತೆ, ಅರುಣೋದಯ ಶಾಲೆ ಹತ್ತಿರ, ವಿಘ್ನೇಶ್ವರ ನಗರ, ಸುಂಕದಕಟ್ಟೆ, ಬೆಂಗಳೂರು-560091. Ph: 9900003891.
ನೋಂದಣಿ ಶುಲ್ಕ : 500/- ರೂ . ( 2 ದಿನದ )
ನೋಂದಣಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ . https://goo.gl/forms/WUXEcLKhnYr3SKE52
Bank Details : Account Name :- MHR Foundation of India ,
Account Number :- 232911100002041
IFSC Code:- ANDB0002329 ,
Bank Name:- Andhra Bank
Branch:- Bharat Nagar, Bangalore,
Account type :- Current Account.
Pay TM Number : 9900003891
Seat limited : 150 Members only, first come first serve .
Organized by :- MHR Foundation of India, Bangalore.
Bus Route : http://mhrfoundationofindia.org/bus-route/
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9900003891 , 8884175609.
Thank You,
Team MHR Foundation of India.