“Sanchari – Gramavastavya Farmer School”
– Our Journey towards Farmer Home
“Sanchari Gramavastavya Farmer School”, a Program aimed at educating necessity and benefits of Chemical Free Natural Farming among farmers. The educating team stays at one village for 24 hours analyzing and suggesting solution to agriculture problems. The main objective is focused at educating Natural Farming, Chemical Free farming, Water Conserving Methods, Advanced Mechanized Farming, Harvesting, Post Harvesting and Marketing organizing Methods. The team is equipped with a Vehicle, Video Projector, Speakers, CCTV, GPS and Internet. The project will run for 365 days, 24 hours with one village each day.
Problems Identified:
Upon interacting with the farmers of different locations, following are identified as serious issues with farmers to be solved at the earliest.
1) Lack of Knowledge on Natural Farming
2) Inefficient Farming Techniques
3) Monocropping instead of Multicropping
4) Considering plant can grow onlyif chemical fertilizers are sprayed
5) Trusting the myth that Natural Farming doesnt give more yield in comparision with chemical Farming
6) Not understanding that, soil is air-tightened because of chemicals sprayed.
7) Improper pollination due to absence of honey bees, flies, birds.
8) Evacuation of Honey bees, birds and flies due to chemical spray.
9) Decrease of Ground Water Table on account of improper water management.
10) Absence of rain water harvesting methods.
11) Not understanding that Borewell can pull up the water, onlyif water is filled in.
12) Absence of Borewell Harvesting Techniques.
13) Less income generation on comparision with Natural Farmers (Earning 1 Lakh / month / acre o Average)
14) Improper harvesting and post harvesting techniques.
and still more…..
“Sanchari Gramavastavya Farmer School” program details:
It is a farmer educating program enabled with following facilities. A team is made and it works for 1 year covering 300 Villages in Kunigal Taluk, Tumkur District, Karnataka State.
1) Educating Team has Natural Farming Experts comprising 2 Members
2) Customized 4 Wheeled Open and/or Closed Vehicle enabled with Projector, Speaker, CCTV, GPS, and Internet etc.
The Natural Farmer Interview Videos, Multi-cropping Models and Farmland videos along with PPT in local language is presented on Projector. The exact location of this vehicle along with the next visit schedules are displayed on the website. Farmers can avail this data to make the best use of this program.
Projected Schedule:
1) 8 AM to 10 AM: Assembling and Interacting with Farmers.
2) 10 AM to 12 AM: Discussing the Farmer problems, Honoring Natural Farmers in that village
3) 12 AM to 4 PM: Discussion on Natural Farming as a solution to all Farmer problems, Water Management and Multicropping Models.
4) 4 PM to 6 PM: Farm Land visits and Suggestions.
5) 6 PM to 8 AM: Stays at Village
This schedule repeats on every day of 365 days except Sunday at 300 Villages of Kunigal Taluk.
How is Farmer Benefitted by this Program:
Though Farmer cannot be fully benefitted by this program, he will be educated on the best practices in one day. If he needs more details, he can avail on visiting our training center (Free of Cost) at Bangalore and Kunigal. In a visit of one day, farmer is benfitted by knowing/understanding the
1) Necessity of Chemical Free Farming
2) Reason to air-tight the soil
3) Reason for the reduction in soil fertility.
4) Reason for less income for his harvest.
5) Advantages of Multicropping against Monocropping
6) How nature cycle has been damaged by Chemical Fertilizers.
7) Natural Modes of pesticides and insecticides.
8) Efficient water management and rain water harvesting.
9) Sustainable Farming in 30 Acres with the use of just 1 Indian Desi Cow.
10) Reasons for the failure of borewell and much more…..
Financials:
The Customized Vehicle + 2 Experts + Pico Projector + Speaker + CCTV + GPS + Web Maintenance + 300 Days Visit + 30,000 KMS coverage costs Rs. 10,00,000 per Year
Other Programs attached:
Social cause (Health, Education etc) and Farmer Friendly objective oriented volunteers or NGO or other organizations can join us in this program.
Transparency:
Every visits and Schedule of the visit is updates on the website http://www.mhrfoundationofindia.org
CCTV Footages, GPS location and the farmer feedbacks are updated day wise and village wise.
Organizer Details:
MHR Foundation of India, a NGO working with farmers since its start on Chemical Free Natural Farming has organized this program. So far the NGO has trained 2000+ farmers on chemical free natural farming pan Karnataka. IT has come up with various programs such as Village Staying, One day Farm Work etc., to bring farming interest in urban residents. More details about NGO’s events are available at www.facebook.com/MHRFoundationofIndia/ Or www.mhrfoundationofindia.org
Support Needed:
We need support from every individual, firm and Volunteer organizations to make this program successful in educating the farmers. You can support us by dedicating your time, knowledge or money.
1) Individual Volunteers: to volunteer in this program, please fill this form https://goo.gl/yAe19Q
2) Organization Volunteers: to volunteer in this program, please fill the form https://goo.gl/a2ZCZw
3) To dedicate your money to this auspicious cause, please click on the link: donate in this page
When the Program does starts:
Program will start on the day, the projected financials is arranged.
Whom to Contact:
For any queries, please call us on +91-9900003891 or write to us at mhrfoundationofindia@gmail.com
ಸಂಚಾರಿ – ಗ್ರಾಮವಾಸ್ತವ್ಯ ರೈತ ಶಾಲೆ
-ಕೃಷಿಕನ ಮನೆಯತ್ತ ನಮ್ಮ ಪಯಣ
“ಬುದ್ಧಿ..!! ನಾವು ರೈತ್ರು, ಹತ್ತಾರು ಎಕ್ರೆ ಜಮೀನಿನ ಮಾಲೀಕ್ರು…ನಮ್ಗೆ ದೇವ್ರು ರಟ್ಟೇಲಿ ಬಲ, ಮಯ್ಯಲ್ಲಿ ಛಲ ಕೊಟ್ಟೋನೆ.. ಭೂಮಿ ಕೆಲಸ ಎಲ್ಲ ಮಾಡ್ತೀವಿ…ತಿನ್ನಕ್ಕೂ, ಮಲಗಕ್ಕೂ, ಊಟಕ್ಕೂ ತೊಂದರೆ ಇಲ್ಲ…ಆದ್ರೆ ನಮ್ಮ್ ಮಕ್ಳು ಆರೋಗ್ಯ, ವಿದ್ಯೆ, ಮದ್ವೆಗೆ ಹಣ ಬೇಕು ಸ್ವಾಮಿ….ನಮ್ ಹೊಲ್ದಾಗೆ ಎಷ್ಟು ದುಡಿದ್ರು ಕಯ್ಯಲ್ಲಿ ದುಡ್ಡೇ ನಿಲ್ತಿಲ್ಲ…ಆದರು ನಾವು ಕೆಲಸ ನಿಲ್ಸಿಲ್ಲ…ಯಾಕಂದ್ರೆ ನಾವು ಅನ್ನದಾತರು…ನಾವು ಕಯ್ಯಿ ಕಟ್ಟಿ ಕೂತ್ರೆ ಪಟ್ಟಣದೋರ್ಗೆ ಊಟ ಎಲ್ಲಿ ಬರುತ್ತೆ…ನಮ್ಗೆ ನಿಮ್ಮ ಕರುಣೆ ಬೇಡ, ಕನಿಕರ ಬೇಡ, ಹಣ ಬೇಡ, ಕಣ್ಣೀರು ಬೇಡ,….ನಮ್ಮ ದುಡಿಮೆಗೆ ತಕ್ಕ ಫಲ ಸಿಗಲಿ ಅಷ್ಟೇ..
ದೊಡ್ಡವರು ಹೇಳಿದ್ರು ಅಂತ ರಾಸಾಯನಿಕ ಹಾಕಿ, ನಮ್ ಭೂಮಿ ಹಾಳ್ ಮಾಡ್ಕೊಂಡೊ…ನಮ್ ಹಿರಿಯರು ನಮ್ಗೆ ಅಂತ ಕೊಟ್ಟಿದ್ದ ಫಲವತ್ತಾದ ಭೂಮಿಗೆ ನಮ್ ಕಯ್ಯಾರೆ ರಾಸಾಯನಿಕ ಅನ್ನೋ ವಿಷ ಕೊಟ್ಟಬಿಟ್ಟೋ…ನಮ್ಗೆ ಬೇಕಿರೋದು ಭೂಮಿ ಫಲವತ್ತತೆ ಕಾಪಾಡೋ ಕೃಷಿ ಪದ್ಧತಿ, ಪ್ರಕೃತಿ ಇಷ್ಟ ಪಡೋ ಕೃಷಿ ಪದ್ಧತಿ, ನಮ್ಮ ಅಜ್ಜ ಮಾಡ್ತಿದ್ದ ಕೃಷಿ ಪದ್ಧತಿ, ಚಿಲಿ-ಪಿಲಿ ಅಂಥ ಹಾರಾಡೋ ಪಕ್ಷಿಗಳು ಇಷ್ಟ ಪಡೋ ಕೃಷಿ…ದಯವಿಟ್ಟು ನಮ್ಗೆ ಒಳ್ಳೆಯ ಕೃಷಿ ಪದ್ಧತಿ ಹೇಳ್ಕೊಡಿ…ಭೂಮಿಲಿ ಚಿನ್ನದಂಥ ಬೆಳೆ ತೆಗಿತೀವಿ…ಈ ಉಪಕಾರ ಮಾಡಿ ಪುಣ್ಯ ಕಟ್ಕೋಳಿ ಸ್ವಾಮಿ…!!!”
—- ಪಾಪಣ್ಣ, ರೈತ ಮುಖಂಡ, ಮಾದಪ್ಪನಹಳ್ಳಿ, ಕುಣಿಗಲ್ ತಾಲ್ಲೂಕ್
“ಸಂಚಾರಿ-ಗ್ರಾಮವಾಸ್ತವ್ಯ ರೈತ ಶಾಲೆ” ಯೋಜನೆಯು ರೈತರಲ್ಲಿ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯ ಅವಶ್ಯಕತೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದ ತಜ್ಞರ ತಂಡವು ಪ್ರತಿ ಹಳ್ಳಿಯಲ್ಲಿ 24 ಘಂಟೆಗಳ ಕಾಲ ಕೃಷಿ ಸಮಸ್ಯೆ-ಪರಿಹಾರಗಳ ಚರ್ಚೆ ನಡೆಸುತ್ತದೆ. ಯೋಜನೆಯ ಪ್ರಮುಖ ಉದ್ದೇಶ ನೈಸರ್ಗಿಕ ಕೃಷಿ, ರಾಸಾಯನಿಕ ಮುಕ್ತ ಕೃಷಿ, ನೀರಿನ ಸಂರಕ್ಷಣೆ, ಆಧುನಿಕ ಯಂತ್ರೋಧಾರಿತ ಕೃಷಿ, ಕೊಯ್ಲಿ ಹಾಗು ಕೊಯ್ಲಿ ನಂತರದ ಬೆಳೆ ಸಂರಕ್ಷಣೆ ಮತ್ತು ಮಾರುಕಟ್ಟೆಯ ವ್ಯವಸ್ಥೆಯ ಬಗೆಗಿನ ವಿಚಾರ ವಿನಿಮಯ. ತಜ್ಞರ ತಂಡ ವಿಶೇಷವಾಗಿ ರಚಿಸಿದ ವಾಹನ, ಪ್ರೊಜೆಕ್ಟರ್, ಸ್ಪೀಕರ್, ಸಿಸಿಟಿವಿ, GPS ಮತ್ತು ಇಂಟರ್ನೆಟ್ ವ್ಯವಸ್ಥೆ ಹೊಂದಿರುತ್ತದೆ. ಈ ಯೋಜನೆಯು 365 ದಿನಗಳು, 24 ಘಂಟೆಗಳು ಒಂದು ಹಳ್ಳಿಯಲ್ಲಿಯಂತೆ ರೈತರ ನಿರಂತರ ಸೇವೆಯಲ್ಲಿರುತ್ತದೆ.
ಗಮನಿಸಿದ ಸಮಸ್ಯೆಗಳು :
ವಿವಿಧ ಪ್ರದೇಶಗಳ ರೈತರ ಜೊತೆ ನಡೆದ ಸಮಾಲೋಚನೆಯಿಂದ ನಮ್ಮ ಗಮನಕ್ಕೆ ಬಂದಿರುವ ಸಮಸ್ಯೆಗಳನ್ನು ಕೆಳಕಂಡಂತೆ ನಮೂದಿಸಿದ್ದೇವೆ . ಈ ಎಲ್ಲಾ ಸಮಸ್ಯೆಗಳ ದುಷ್ಪರಿಣಾಮ ಮಿತಿಮೀರಿದ್ದು ಈ ಕೂಡಲೇ ಪರಿಹರಿಸ ಬೇಕಿದೆ .
1) ನೈಸರ್ಗಿಕ ಕೃಷಿಯ ಬಗ್ಗೆ ಅರಿವಿಲ್ಲದಿರುವುದು
2) ವ್ಯರ್ಥ ಕೃಷಿ ಪದ್ಧತಿ .
3) ಮಿಶ್ರ ಬೆಳೆಯ ಬದಲಿಗೆ ಏಕ ಬೆಳೆಯ ಕೃಷಿ ಪದ್ದತಿಗೆ ಮಹತ್ವ ಕೊಟ್ಟಿರುವುದು .
4) ರಾಸಾಯನಿಕ ಗೊಬ್ಬರ ಸಿಂಪಡಿಸುವ ಮಾತ್ರವೇ ಗಿಡಬೆಳವಣಿಗೆ ಸಾಧ್ಯ ಎಂಬ ಮೂಢ ಕಲ್ಪನೆಯನ್ನು ಅಗಾಧವಾಗಿ ಕೃಷಿಕ ನಂಬಿರುವುದು .
5) ನೈಸರ್ಗಿಕ ಕೃಷಿ ಪದ್ದತಿಯು, ರಾಸಾಯನಿಕ ಕೃಷಿ ಪದ್ದತಿಯಷ್ಟು ಇಳುವರಿ ಕೊಡುವುದಿಲ್ಲವೆಂಬ ತಪ್ಪು ಕಲ್ಪನೆಯಲ್ಲಿ ಕೃಷಿಕ ಇರುವುದು .
6) ರಾಸಾಯನಿಕ ಸಿಂಪಡಿಸುವಿಕೆಯಿಂದ ಮಣ್ಣಿನ ಬಿಗುವಿಕೆ ಆಗುತ್ತಿರುವುದರ ಅರಿವು ಇಲ್ಲದಿರುವುದು .
7) ಜೇನುಹುಳ , ಚಿಟ್ಟೆ , ಪಕ್ಷಿಗಳಿಲ್ಲದಿರುವುದರಿಂದ ಪರಾಗಸ್ಪರ್ಶದಲ್ಲಿ ಇಳಿಕೆ ಆಗಿರುವುದು .
8) ರಾಸಾಯನಿಕ ಸಿಂಪಡಿಸುವಿಕೆ ಇಂದ ಜೇನುಹುಳ , ಚಿಟ್ಟೆ , ಪಕ್ಷಿಗಳು ಕಾಣೆಯಾಗುತ್ತಿರುವುದು .
9) ಕೃಷಿಯಲ್ಲಿ ಅನುಚಿತ ನೀರಿನ ಬಳಕೆಯಿಂದ ಅಂತರ್ಜಲ ಮಟ್ಟ ಕುಸಿದಿರುವುದು .
10) ಮಳೆನೀರು ಕೊಯ್ಲು ಪದ್ದತಿಯು ಕಾಣೆಯಾಗಿರುವುದು.
11) ಕೊಳವೆ ಬಾವಿಗೆ ನೀರು ತುಂಬದೇ, ನೀರನ್ನು ನಿರಂತರವಾಗಿ ಕೊಳವೆ ಬಾವಿಯಿಂದ ಎತ್ತುವ ದುಸ್ಸಾಹಸ ನಡೆಯುತ್ತಿರುವುದು.
12) ಕೊಳವೆಬಾವಿ ಮರುತುಂಬುವ ಪದ್ದತಿಯ ಪಾಲಿಸದೆ ಇರುವುದು.
13) ನೈಸರ್ಗಿಕ ಕೃಷಿಕರ (ಒಂದು ತಿಂಗಳಿಗೆ ಒಂದು ಎಕರೆಗೆ ಒಂದು ಲಕ್ಷ ಆದಾಯ ) ಹೋಲಿಕೆಯಲ್ಲಿ ರಾಸಾಯನಿಕ ಕೃಷಿಕರ ನಿವ್ವಳ ಆದಾಯ ಕಡಿಮೆ ಇರುವುದು .
14) ಅನುಚಿತ ಕೊಯ್ಲು ಮತ್ತು ಕೊಯ್ಲು ನಂತರದ ಬೆಳೆ ಸಂರಕ್ಷಣೆ ಪದ್ದತಿಗಳು ಮತ್ತು ಹಲವಾರುಗಳು …….
“ಸಂಚಾರಿ ಗ್ರಾಮವಾಸ್ತವ್ಯ ರೈತ ಶಾಲೆ” ಯೋಜನೆಯ ವಿವರಗಳು:
ಯೋಜನೆಯ ಅನುಸಾರ ಕೃಷಿಕರಿಗೆ ಸಮೃದ್ಧ-ಕಡಿಮೆ ವೆಚ್ಚದ ನೈಸರ್ಗಿಕ ಕೃಷಿಯ ವಿಚಾರಗಳನ್ನು ಕೃಷಿಕನ ಮನೆಗೆ ಹೋಗಿ ತಿಳಿಸುವದಾಗಿದೆ. ಇದಕ್ಕಾಗಿ ಒಂದು ತಂಡವೇ ರಚಿಸಲ್ಪಟ್ಟಿದ್ದು ವರ್ಷದ 365 ದಿನಗಳು, ದಿನದ 24 ಗಂಟೆಗಳು ಕಾರ್ಯನಿಮಿತ್ತವಾಗಿರುತ್ತದೆ . ಮೊದಲನೇ ಯೋಜನೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ 300 ಗ್ರಾಮಗಳಲ್ಲಿ ಕೆಲಸ ಪ್ರಾರಂಭಿಸುತ್ತವೆ . ಈ ಯೋಜನೆಯು ಕೆಳಕಂಡ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ .
1) ತರಬೇತಿದಾರರ ತಂಡ – ನೈಸರ್ಗಿಕ ಕೃಷಿಕರು 2 ಮಂದಿ .
2) ಸೂಕ್ತ ರೀತಿಯಲ್ಲಿ projector , speaker , cctv , gps , internet ಗಳನ್ನೂ ಒಳಪಡಿಸುವಂತಹ 4 ಚಕ್ರದ ಮಾರ್ಪಡಿಸಿದ ವಾಹನ .
ನೈಸರ್ಗಿಕ ಕೃಷಿಕರ ಸಂದರ್ಶನದ ದೃಶ್ಯ, ಮಿಶ್ರ ಬೆಳೆ ಮಾದರಿಯ ದೃಶ್ಯ , ಸಮೃದ್ಧ ಕೃಷಿ ಭೂಮಿಯ ದೃಶ್ಯ ಮತ್ತು ನೈಸರ್ಗಿಕ ಕೃಷಿಯ ರೀತಿನೀತಿಗಳನ್ನು ಕನ್ನಡ ಭಾಷೆಯಲ್ಲಿ projector ಮೂಲಕ ಬಿಂಬಿಸಲಾಗುವುದು. ವಾಹನದ ನಿಖರ ಸ್ಥಳ ಮತ್ತು ಮುಂದಿನ ಗ್ರಾಮವಾಸ್ತವ್ಯದ ವೇಳಾಪಟ್ಟಿಯನ್ನು website ನಲ್ಲಿ ನಮೂದಿಸಲಾಗುವುದು. ಕೃಷಿಕರು ಮತ್ತು ಕೃಷಿಯೇತರರು ಈ ವಿವರಗಳನುಸಾರ ಯೋಜನೆಯ ಅತ್ಯಧಿಕ ಉಪಯೋಗ ಮಾಡಿಕೊಳ್ಳಬಹುದು .
ಯೋಜನೆಯ ವೇಳಾಪಟ್ಟಿ:
1) ಬೆಳಗ್ಗೆ 8 ರಿಂದ 10 ವರೆಗೆ : ರೈತರನ್ನು ಸಮಾವೇಶಿಸಿ ವಿಚಾರ ವಿನಿಮಯ ನಡೆಸುವುದು .
2) ಬೆಳಗ್ಗೆ 10 ರಿಂದ 12 ವರೆಗೆ : ಕೃಷಿ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ಆ ಗ್ರಾಮದ ನೈಸರ್ಗಿಕ ಕೃಷಿಕರ ಸನ್ಮಾನ ಕಾರ್ಯಕ್ರಮ
3) ಮಧ್ಯಾಹ್ನ 12 ರಿಂದ 4 ರವರೆಗೆ : ಕೃಷಿಕರ ಸಮಸ್ಯೆಗೆ ನೈಸರ್ಗಿಕ ಕೃಷಿಯಲ್ಲಿರುವ ಪರಿಹಾರ, ಮಿಶ್ರಬೆಳೆಯ ಮಾದರಿಗಳು ಹಾಗು ನೀರಿನ ಮಿತವ್ಯಯದ ಕೃಷಿ ಪದ್ಧತಿಗಳ ಬಗ್ಗೆ ಚರ್ಚೆ.
4) ಸಂಜೆ 4 ರಿಂದ 6 ರವರೆಗೆ: ಆ ಹಳ್ಳಿಯ ಕೃಷಿ ಭೂಮಿಗಳ ತಪಾಸಣೆ ಮತ್ತು ಸಲಹೆಗಳ ವಿನಿಮಯ.
5) ಸಂಜೆ 6 ರಿಂದ ಬೆಳಗ್ಗೆ 8 ರವರೆಗೆ: ಆ ಹಳ್ಳಿಯಲ್ಲೇ ಗ್ರಾಮವಾಸ್ತವ್ಯ.
ಈ ವೇಳಾಪಟ್ಟಿಯು ವರ್ಷದ 365 ದಿನಗಳು ಸಹ ಕುಣಿಗಲ್ ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುತ್ತದೆ.
ಈ ಯೋಜನೆಯಿಂದ ಕೃಷಿಕನಿಗೆ ಸಿಗುವ ಲಾಭಗಳು:
ಈ ಯೋಜನೆಯಲ್ಲಿ ನಮ್ಮ ತಂಡವು ಒಂದು ದಿನ ಮಾತ್ರ ಗ್ರಾಮದಲ್ಲಿ ವಾಸ್ತವ್ಯ ಹೂಡುವುದರಿಂದ , ಪೂರ್ತಿ ಅಲ್ಲದಿದ್ದರೂ ಒಂದು ದಿನದಲ್ಲಿ ಸಾಧ್ಯವಾಗುವಷ್ಟು ವಿಚಾರಗಳ ವಿನಿಮಯ ಮಾಡಿಕೊಡಲಾಗುವುದು . ಅತ್ಯುತ್ತಮ ಕೃಷಿ ಪದ್ದತಿಗಳ ಬಗ್ಗೆ ರೈತರಿಗೆ ತಿಳಿಸಿ ಕೊಡಲಾಗುವುದು. ಇನ್ನು ಹೆಚ್ಚಿನ ವಿಚಾರಗಳಿಗಾಗಿ ಕೃಷಿಕರು MHR FOUNDATION OF INDIA ಸಂಸ್ಥೆಯ ಬೆಂಗಳೂರು ಮತ್ತು ಕುಣಿಗಲ್ ಶಾಖೆಯ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳಬಹುದು .
ಒಂದು ದಿನದ “ಸಂಚಾರಿ ಗ್ರಾಮವಾಸ್ತವ್ಯ ರೈತ ಶಾಲೆ” ಕಾರ್ಯಕ್ರಮದಲ್ಲಿ ರೈತರಿಗೆ ಈ ಎಲ್ಲಾ ವಿಚಾರಗಳನ್ನು ತಿಳಿಸಿಕೊಡಲಾಗುವುದು .
1) ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯ ಅವಶ್ಯಕತೆ ಮತ್ತು ಲಾಭಗಳು .
2) ಮಣ್ಣು ಗಟ್ಟಿಯಾಗಿರುವುದರ ಕಾರಣಗಳು .
3) ಮಣ್ಣಿನ ಫಲವತ್ತತೆಯ ಕ್ಷಮತೆಯ ಕಾರಣಗಳು .
4) ಕಡಿಮೆ ಇಳುವರಿಯ ಕಾರಣಗಳು .
5) ಏಕಬೆಳೆಯ ಹೋಲಿಕೆಯಲ್ಲಿ ಮಿಶ್ರ ಬೆಳೆಯಲ್ಲಿ ಕಾಣುವ ಲಾಭಗಳು .
6) ರಾಸಾಯನಿಕ ಉಪಯೋಗದಿಂದ ಆಗಿರುವ ನೈಸರ್ಗಿಕ ಚಕ್ರಗಳಲ್ಲಿನ ಏರು – ಪೇರು.
7) ನೈಸರ್ಗಿಕ ಸಂಪನ್ಮೂಲಗಳಿಂದ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು, ಕೃಷಿ ಭೂಮಿಯಲ್ಲಿ, ಖರ್ಚಿಲ್ಲದೆ ಸಿದ್ಧಪಡಿಸುವ ರೀತಿ .
8) ಒಂದು ದೇಸಿ ಹಸುವಿನಿಂದ 30 ಎಕರೆ ಸಮೃದ್ಧ ಕೃಷಿ ಮಾಡುವ ವಿಶ್ಲೇಷಣೆ .
9) ಪರಿಣಾಮಕಾರಿ ಮಳೆನೀರು ಮತ್ತು ಕೊಳವೆ ಭಾವಿ ಸಂರಕ್ಷಣೆಯ ವಿಚಾರಧಾರೆ .
10) ಕೊಳವೆಬಾವಿಯ ವೈಫಲ್ಯದ ಕಾರಣಗಳ ವಿಚಾರವಿನಿಮಯ ಮತ್ತು ಹಲವು ಉಪಯೋಗಕಾರಿ ಸಲಹೆಗಳು ……..
ಹಣಕಾಸಿನ ವಿಚಾರ :
ಮಾದರಿಕರಿಸಿದ ವಾಹನ + 2 ತರಬೇತಿದಾರರು + projector , speaker + cctv + gps + website ನಿರ್ವಹಣೆ + 365 ದಿನಗಳ ಗ್ರಾಮವಾಸ್ತವ್ಯ + 30,000 ಕಿಲೋಮೀಟರ್ಸ್ ವ್ಯಾಪ್ತಿಯ ಹೋರಾಟ ಮತ್ತು ನಿರ್ವಹಣೆಯ ಅಂದಾಜು ಮೊತ್ತ 10 ಲಕ್ಷ ರೂಪಾಯಿಗಳು ಒಂದು ವರ್ಷಕ್ಕೆ .
ಭಾಗಿಯಾಗುವ ಇತರೆ ಕಾರ್ಯಕ್ರಮಗಳು :
ಸಾಮಾಜಿಕ ಏಳಿಗೆ (ಶಿಕ್ಷಣ , ಆರೋಗ್ಯ ಮುಂತಾದವುಗಳು ) ಮತ್ತು ಕೃಷಿ ಸ್ನೇಹಿ ಉದ್ದೇಶ ಪೂರ್ವಿತ ಯಾವುದೇ ಯೋಜನೆಯಾಗಲಿ, ಸ್ವಯಂ ಸೇವಕರಾಗಲಿ ಅಥವಾ ಸಂಸ್ಥೆಯಾಗಲಿ ನಮ್ಮ ಈ ಗ್ರಾಮವಾಸ್ತವ್ಯ ಯೋಜನೆಯಲ್ಲಿ ಕೈಜೋಡಿಸಬಹುದು .
ಪಾರದರ್ಶಕತೆ :
ಪ್ರತಿ ಗ್ರಾಮವಾಸ್ತವ್ಯ ಮತ್ತು ವೇಳಾಪಟ್ಟಿಯನ್ನು www.mhrfoundationofindia.org website ನಲ್ಲಿ ಅಧಿಕೃತವಾಗಿ ದಾಖಲಾಗಿಸಿರುವುದು. ದಿನದ ಮತ್ತು ಗ್ರಾಮದ ಆಧಾರಿತವಾಗಿ cctv ದೃಶ್ಯಾವಳಿ , gps ಸ್ಥಳ ಮತ್ತು ರೈತರ ಪ್ರತಿಕ್ರಿಯೆಗಳನ್ನು ಪ್ರಕಟಿಸಲಾಗುವುದು .
ಆಯೋಜಕರ ವಿವರ :
ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯ ಬಗ್ಗೆ ಮೊದಲಿನಿಂದಲೂ ಜನರಲ್ಲಿ, ಕೃಷಿಕರಲ್ಲಿ ತಿಳಿಸುತ್ತ ಕಾರ್ಯಪ್ರವೃತ್ತರಾಗಿರುವ , MHR FOUNDATION OF INDIA ಸಂಸ್ಥೆಯು ಈ ಯೋಜನೆಯನ್ನು ಹಮ್ಮಿಕೊಂಡಿದೆ . ಈಗಾಗಲೇ ಕರ್ನಾಟಕದಾದ್ಯಂತ 2000 ಕ್ಕೂ ಅಧಿಕ ಕೃಷಿಕರು ತರಬೇತಿಯ ಸೌಲಭ್ಯವನ್ನು ಪಡೆದುಕೊಂಡಿದ್ದು ಸಮೃದ್ಧ ಕೃಷಿಕರಾಗಿದ್ದಾರೆ. ಇದಲ್ಲದೆ ಗ್ರಾಮವಾಸಿಗಳಲ್ಲಿ ಕೃಷಿಯ ಆಸಕ್ತಿ ಮೂಡಿಸಲು ಗ್ರಾಮವಾಸ್ತವ್ಯ, ಶ್ರಮಾದಾನ , ಮಣ್ಣಿನಮಗದಂತಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ . ಈ ಸಂಸ್ಥೆಯ ಹೆಚ್ಚಿನ ವಿವರಗಳನ್ನು ತಿಳಿಯಲು www.facebook.com/MHRFoundationofIndia/ Or www.mhrfoundationofindia.org ಈ ಲಿಂಕ್ ಅನ್ನು ಕ್ಲಿಕ್ ಮಾಡಿ
ಅಪೇಕ್ಷಿಸುತ್ತಿರುವ ಸಹಾಯ :
ವಾರ್ಷಿಕ ಯೋಜನೆಯಾಗಿರುವ ಸಂಚಾರಿ ಗ್ರಾಮವಾಸ್ತವ್ಯ, ರೈತಶಾಲೆ ಕಾರ್ಯಗತಗೊಳಿಸಲು ಎಲ್ಲರ ಸಹಕಾರ ಬೇಕಿದೆ. ವೈಯಕ್ತಿಕವಾಗಿ ಸಂಸ್ಥೆಯ ಮೂಲಕವಾಗಿ ಯಾರಾದರೂ ಸಹ ಈ ಶ್ರೇಯಸ್ಕರ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ನಿಮ್ಮ ಸಮಯವನ್ನಾಗಲಿ ,ಜ್ಞಾನವನ್ನಾಗಲಿ ಅಥವಾ ಹಣವನ್ನಾಗಲಿ ಈ ಕಾರ್ಯಕ್ಕೆ ಮುಡಿಪಾಗಿಡಬಹುದು .
ನೈಸರ್ಗಿಕ ಕೃಷಿ ಪದ್ದತಿಯನ್ನು ಪ್ರತಿ ಗ್ರಾಮಗಳಿಗೆ ತಿಳಿಸುವ ಕಾರ್ಯ “MHR Foundation of India” ಸಂಸ್ಥೆಯು ಪ್ರಾರಂಭಿಸಿದ್ದು, ಎಲ್ಲರು ಈ ಕಾರ್ಯದಲ್ಲಿ ಯಾವುದಾದರು ರೀತಿಯಲ್ಲಿ ಪಾಲ್ಗೊಳ್ಳಬೇಕಿಂದು ಆಶಿಸುತ್ತೇವೆ. ನಿಮ್ಮ ಸಮಯ, ಜ್ಞಾನ ಅಥವಾ ಹಣವನ್ನು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇವೆ.
1) ವೈಯಕ್ತಿಕ ಸ್ವಯಂ ಸೇವಕರು ಈ ಲಿಂಕ್ ಅನ್ನು https://goo.gl/yAe19Q ಕ್ಲಿಕ್ ಮಾಡಿ ನೊಂದಾಯಿಸಿಕೊಳ್ಳಿ
2) ಸ್ವಯಂಸೇವಕ ಸಂಸ್ಥೆಗಳು ಈ ಲಿಂಕ್ ಅನ್ನು https://goo.gl/a2ZCZw ಕ್ಲಿಕ್ ಮಾಡಿ ನೊಂದಾಯಿಸಿಕೊಳ್ಳಿ .
3) ಹಣವನ್ನು ದಾನಮಾಡುವವರು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಹಣವರ್ಗಾವಣೆ ಮಾಡಬಹುದು .
ಕಾರ್ಯಕ್ರಮ ಪ್ರಾರಂಭವಾಗುವ ದಿನ:
ಯೋಜನೆ ಕಾರ್ಯಪ್ರವೃತ್ತವಾಗಲು ಬೇಕಿರುವ ಹಣವು ಸಂಘಟಿತವಾದ ದಿನವೇ ಗ್ರಾಮವಾಸ್ತವ್ಯ ಪ್ರಾರಂಭವಾಗುವುದು .
ಸಂಪರ್ಕಿಸಿ :
ಯಾವುದೇ ಇನ್ನಿತರ ಪ್ರೆಶ್ನೆಗಳಿಗೆ ಈ +91-9900003891 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಿ ಅಥವಾ mhrfoundationofindia@gmail.com ಇ-ಮೇಲ್ ಮಾಡಿ .
“ Sanchari – Gramavastavya Farmer School”
- Our Journey towards Farmer Home
“Sanchari Gramavastavya Farmer School”, a Program aimed at educating necessity and benefits of Chemical Free Natural Farming among farmers. The educating team stays at one village for 24 hours analyzing and suggesting solution to agriculture problems. The main objective is focused at educating Natural Farming, Chemical Free farming, Water Conserving Methods, Advanced Mechanized Farming, Harvesting, Post Harvesting and Marketing organizing Methods. The team is equipped with a Vehicle, Video Projector, Speakers, CCTV, GPS and Internet. The project will run for 365 days, 24 hours with one village each day.
“Sanchari Gramavastavya Farmer School” program details:
It is a farmer educating program enabled with following facilities. A team is made and it works for 1 year covering 300 Villages in Kunigal Taluk, Tumkur District, Karnataka State.
- Educating Team has Natural Farming Experts comprising 2 Members
- Customized 4 Wheeled Open and/or Closed Vehicle enabled with Projector, Speaker, CCTV, GPS, and Internet etc.
The Natural Farmer Interview Videos, Multi-cropping Models and Farmland videos along with PPT in local language is presented on Projector. The exact location of this vehicle along with the next visit schedules are displayed on the website. Farmers can avail this data to make the best use of this program.
How is Farmer Benefited by this Program:
Though Farmer cannot be fully benefited by this program, he will be educated on the best practices in one day. If he needs more details, he can avail on visiting our training center (Free of Cost) at Bangalore and Kunigal. In a visit of one day, farmer is befitted by knowing/understanding the
- Necessity of Chemical Free Farming
- Reason to air-tight the soil
- Reason for the reduction in soil fertility.
- Reason for less income for his harvest.
- Advantages of Multicropping against Monocropping
- How nature cycle has been damaged by Chemical Fertilizers.
- Natural Modes of pesticides and insecticides.
- Efficient water management and rain water harvesting.
- Sustainable Farming in 30 Acres with the use of just 1 Indian Desi Cow.
- Reasons for the failure of borewell and much more…..